
2nd April 2025
ಶಹಾಪುರ: ಇಂದು ಸಂಜೆಯೊಳಗೆ ನೀರು ಬಿಡುವ ನಿರ್ಧಾರ ಕೈಕೊಳ್ಳಬೇಕು, ಇಲ್ಲವಾದರೇ ನಾಳೆ ಯಾದಗಿರಿ ಬಂದ್, ಮುಂದಿನ ನಡೆ ರೈತಸಂಘಟನೆಗಳು,ತೆಗೆದುಕೊಳ್ಳುವ ನಿರ್ಧಾರದಂತೆಯೇ ಹೋರಾಟ ನಿರಂತರವಾಗಿಮುಂದುವರೆಸಲಾಗುವುದು ಎಂದು ಮಾಜಿ ಸಚಿವ ರಾಜೂ ಗೌಡ ಎಚ್ಚರಿಸಿದ್ದಾರೆ.
ಶಹಾಪುರ ಸಮೀಪದ ಭೀ.ಗುಡಿ ಸರ್ಕಲ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದ ಪಕ್ಷಾತೀತ ಹೊರಾಟದಲ್ಲಿ ಮಾತನಾಡಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ನೀರು ಬೀಡುವವರೆಗೂ ಹೋರಾಟ ನಿಲ್ಲಿಸುವ ಮಾತೇ ಇಲ್ಲ ಎಂದು ಹೇಳಿದರು. ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ, ಜಿಲ್ಲೆಯ ಮೂವರು, ನೆರೆಯ ಜೇರ್ವಗಿ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿದರೇ ನೀರು ತಾನಾಗಿಯೇ ಹರಿಯುತ್ತದೆ ಎಂದು ಗುಡುಗಿದರು.
ನೆರೆ ಜಿಲ್ಲೆ ಸಚಿವ ಎಂ.ಬಿ.ಪಾಟೀಲ್ ಅವರನ್ನು ನೋಡಿ ಕಲಿಯರಿ, ಅವರು ಹೇಗೆ ತಮ್ಮ ಜಿಲ್ಲೆಯ ರೈತರಿಗೆ ನೀರು ಹರಿಸಿದರು. ಸಿಎಂ, ಡಿಸಿಎಂ ಎದುರು ನಿಂತು ನೀರು ಹರಿಸಿ ಎಂದು ಕೇಳಲೂ ಧೈರ್ಯವಿಲ್ಲ, ಕೇಳಿದರೇ ಎಲ್ಲಿ ಸಚಿವ ಸ್ಥಾನ ಹೊಗುತ್ತದೆ, ಇಲ್ಲವೇ ನಿಮ್ಮ ಅಕ್ರಮ ದಂಧೆ ನಿಲ್ಲುತ್ತವೆಂದು ಹೆದರುತ್ತಿದ್ದಿರಿ? ಮೊದಲು ಅನ್ನದಾತ, ಆಮೇಲೆ ರಾಜಕೀಯ, ಅಧಿಕಾರ ಎನ್ನುವ ಸತ್ಯ ಅರಿಯರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಒಬ್ಬ ರಾಜೂಗೌಡನ ಹೋರಾಟ ಅಲ್ಲ, ಜಿಲ್ಲೆಯ ರೈತರ ಪರವಾಗಿ ನಡೆಯುತ್ತಿರುವ ಪಕ್ಷಾತೀತ ಹೋರಾಟವೆಂದು ಸ್ಪಷ್ಟಪಡಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ಅಮೀನ್ ರಡ್ಡಿ ಯಾಳಗಿ, ಹಾಲಿ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ಕರವೇ ಅಧ್ಯಕ್ಷ ಟಿ.ಎನ್.ಭೀಮು ನಾಯಕ್, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ರೈತ ಮುಖಂಡ ಮಹೇಶ ಸುಬೇದಾರ ಸೇರಿದಂತೆಯೇ ಅನೇಕರು ಮಾತನಾಡಿ, ರೈತರಿಗೆ ನೀರು ಬಿಡುವ ವಿಷಯದಲ್ಲಿ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದರು.
ಜಿಲ್ಲೆ ಸಚಿವ, ಶಾಸಕರ ನಡೆಯನ್ನು ಖಂಡಿಸಿದರು. ರೈತರು ಬಿತ್ತಿ ಬೆಳೆದರೇ ನಾವು, ನೀವು ಉಂಡುಟ್ಟು ಆರಾಮವಾಗಿ ಇರುತ್ತೆವೆ, ಈ ಕನಿಷ್ಠ ಪ್ರಜ್ಞೆ ಇಟ್ಟುಕೊಂಡೂ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ನೀರು ಹರಿಸಿ ಎಂದರು.
------
ಯಾದಗಿರಿ ಜಿಲ್ಲೆ, ದೇವದುರ್ಗ ಮತ್ತು ಜೇರ್ವಗಿ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ರಸ್ತೆ ತಡೆಯಲ್ಲಿ ಭಾಗವಹಿಸಿದ್ದರು.
ಸುಮಾರು ಎರಡು ತಾಸು ರಸ್ತೆ ನಡೆಯಿತು.
ಇದರಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರ
ಈ ಬೃಹತ್ ಪ್ರತಿಭಟನೆಯಲ್ಲಿ ಇದ್ದರು.
ನಾವೇ ಮೆರೆಯುಸುತ್ತೆವೆ
ಜಿಲ್ಲೆಯ ರೈತರ ಪರವಾಗಿ ನಿಂತು ಕೂಡಲೇ ನೀರು ಬಿಡಿಸಿ, ಈ ಕೆಲಸ ಮಾಡಿದರೇ ನಾವೇ ನಿಮ್ಮ ಪೊಟೊ ಕೊರಳಿಗೆ ಹಾಕಿಕೊಂಡು ಮೆರೆಯುಸುತ್ತೆವೆ.
ರಾಜೂಗೌಡ, ಮಾಜಿ ಸಚಿವ
ರೈತರ ಬಗ್ಗೆ ಕಾಳಜಿ ಇಲ್ಲದ ಸಚಿವರು.
ಜಿಲ್ಲೆಯ ರೈತರ ಮತಗಳಿಂದಲೇ ಗೆದ್ದು ಶಾಸಕರಾಗಿ ಸಚಿವರಾಗಿರುವ ಶರಣಬಸಪ್ಪ ದರ್ಶನಾಪುರ ಅವರು, ನೀರಿಗಾಗಿ ರೈತರ ಬೀದಿಗಿಳಿದರೂ ತುಟಿ ಬಿಚ್ಚಿಲ್ಲ, ಬದಲಿಗೆ ತಡವಾಗಿ ಬಿತ್ತನೆ ಮಾಡಿದರೇ ನೀರು ಎಲ್ಲಿಂದ ಕೊಡಬೇಕೆಂದು ರೈತರನ್ನೆ ಪ್ರಶ್ನಿಸಿದ್ದಾರೆ. ಅವರಿಗೆ ರೈತರ ಕಷ್ಟ ಗೊತ್ತಿಲ್ಲ, ಅಧಿಕಾರ ಮತ್ತು ಶ್ರೀಮಂತಿಕೆಯಲ್ಲಿ ಬೆಳೆದಿದ್ದಾರೆ.
ಅಮೀನ್ ರಡ್ಡಿ ಯಾಳಗಿ
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು.
ಈ ಸಂದರ್ಭದಲ್ಲಿ ರಾಜ ಹಣಮಂತ ನಾಯಕ, ಬಸವರಾಜ ಸ್ಥಾವರಮಠ,ಬಸನಗೌಡ ಯಾಡಿಯಾಪುರ,ಯಲ್ಲಪ್ಪ ಕುರುಕುಂದಿ, ಸುರೇಶ್ ಸಜ್ಜನ್,ವೀರೆಶ ಸಾಹುಕಾರ ಹುಣಸಗಿ,ಶೋಭಾ ಬಾಣಿ,ಬಿ.ಎಮ್.ಹಳ್ಳಿಕೊಟಿ,ಸಿದ್ದನಗೌಡ ಕರಿಭಾವಿ,ಚಂದ್ರಶೇಖರ ಮಾಗನೂರು,ದೇವಿಂದ್ರಪ್ಪ ಕೊನೇರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಮೆಲಪ್ಪ ಗುಳುಗಿ ಹಾಗೂ ಪರುಶುರಾಮ ಕುರಕುಂದಿ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಜಾಕ,ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜ ಹನುಮಂತ ನಾಯಕ,ಸಿದ್ದಣ್ಣ ಗೌಡ, ಶಿವರಾಜ ದೆಶಮುಖ, ರಾಜಶೇಖರ್ ಗೂಗಲ್, ರಾಜಶೇಖರ್ ಕಾಡಂನೊರ, ಚಂದ್ರಶೇಖರ ಯಾಳಗಿ,ಶಹಾಪುರ ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತಿಕಟಿಗಿ,ರಾಜುಗೌಡ ಉಕ್ಕಿನಾಳ,ಹಯಳ್ಳಪ್ಪ ಆಚಾರ್ಯ ಜೇವರ್ಗಿ,ಸೇರಿದಂತೆ ವಿವಿಧ ಸಂಘಟನೆಗಳು ಪದಾಧಿಕಾರಿಗಳ ಉಪಸ್ಥಿತರಿದ್ದರು.....
ಪೋಲಿಸ್ ಧ್ವಜ ದಿನಾಚರಣೆ ಶಿಸ್ತು, ಶೃದ್ಧೆ, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳಿ-ಗುಡ್ಡಳ್ಳಿ